ನಾವು ಆನ್‌ಲೈನ್‌ನಲ್ಲಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಹಾಗೂ ಶೋಷಣೆಯ ವಿರುದ್ಧ ಹೋರಾಡಲು ಹೆಚ್ಚು ಹೂಡಿಕೆ ಮಾಡುತ್ತೇವೆ ಮತ್ತು ನಮ್ಮ ಪ್ಲ್ಯಾಟ್‌ಫಾರ್ಮ್‌ಗಳಲ್ಲಿ ಅಪರಾಧಗಳನ್ನು ತಡೆಯಲು, ಪತ್ತೆಹಚ್ಚಲು, ತೆಗೆದುಹಾಕಲು ಮತ್ತು ವರದಿ ಮಾಡಲು ನಮ್ಮದೇ ಒಡೆತನದ ತಂತ್ರಜ್ಞಾನವನ್ನು ಬಳಸುತ್ತೇವೆ.

ಸಂಸ್ಥೆಗಳು CSAM ನ ವಿರುದ್ಧ ಹೋರಾಡಲು ಸಹಾಯ ಮಾಡುವುದಕ್ಕಾಗಿ ನಮ್ಮ ತಾಂತ್ರಿಕ ಪರಿಣತಿಯನ್ನು ಹಂಚಿಕೊಳ್ಳಲು ಮತ್ತು ಪರಿಕರಗಳನ್ನು ಅಭಿವೃದ್ಧಿಪಡಿಸಲು ಹಾಗೂ ಹಂಚಿಕೊಳ್ಳಲು ನಾವು NGO ಗಳೊಂದಿಗೆ ಹಾಗೂ ಉದ್ಯಮದೊಂದಿಗೆ ಕಾರ್ಯಕ್ರಮಗಳಲ್ಲಿ ಪಾಲುದಾರಿಕೆ ಹೊಂದಿದ್ದೇವೆ.

ನಮ್ಮ ಮಕ್ಕಳ ಸುರಕ್ಷತೆ ಟೂಲ್‌ಕಿಟ್‌ನ ಕುರಿತು ಇಲ್ಲಿ ಇನ್ನಷ್ಟು ತಿಳಿಯಿರಿ.

ನಮ್ಮದೇ ಪ್ಲ್ಯಾಟ್‌ಫಾರ್ಮ್‌ಗಳು ಹಾಗೂ ಸೇವೆಗಳಲ್ಲಿ ದೌರ್ಜನ್ಯದ ವಿರುದ್ಧ ಹೋರಾಡುವುದು

ನಮ್ಮ ಆರಂಭಿಕ ದಿನಗಳಿಂದಲೇ, ನಮ್ಮ ಸೇವೆಗಳಲ್ಲಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಹಾಗೂ ಶೋಷಣೆಯ ವಿರುದ್ಧ ಹೋರಾಡಲು Google ಬದ್ಧವಾಗಿದೆ. ಮಕ್ಕಳ ಲೈಂಗಿಕ ಶೋಷಣೆಯ ಕಂಟೆಂಟ್ ಹಾಗೂ ವರ್ತನೆಯನ್ನು ತಡೆಯಲು, ಪತ್ತೆಹಚ್ಚಲು, ತೆಗೆದುಹಾಕಲು ಮತ್ತು ವರದಿ ಮಾಡಲು, ನಾವು ಗಮನಾರ್ಹ ಸಂಪನ್ಮೂಲಗಳನ್ನು—ತಂತ್ರಜ್ಞಾನ, ಜನರು ಮತ್ತು ಸಮಯವನ್ನು—ಮೀಸಲಿಡುತ್ತೇವೆ.

ನಾವು ಏನು ಮಾಡುತ್ತಿದ್ದೇವೆ?

ದೌಜನ್ಯವನ್ನು ತಡೆಗಟ್ಟುವುದು

ದೌಜನ್ಯವನ್ನು ತಡೆಗಟ್ಟುವುದು


ನಮ್ಮ ಉತ್ಪನ್ನಗಳು, ಮಕ್ಕಳು ಬಳಸುವುದಕ್ಕೆ ಸುರಕ್ಷಿತವಾಗಿವೆ ಎಂಬುದನ್ನು ಖಚಿತಪಡಿಸುವ ಮೂಲಕ ದೌರ್ಜನ್ಯ ಉಂಟಾಗುವುದನ್ನು ತಪ್ಪಿಸುವ ಗುರಿಯನ್ನು ನಾವು ಹೊಂದಿದ್ದೇವೆ. ಹೊಸ ರೂಪದ ಬೆದರಿಕೆಗಳು ಹಾಗೂ ತಪ್ಪೆಸಗುವ ಹೊಸ ವಿಧಾನಗಳನ್ನು ಅರ್ಥಮಾಡಿಕೊಳ್ಳಲು, ಲಭ್ಯವಿರುವ ಎಲ್ಲಾ ಒಳನೋಟಗಳು ಹಾಗೂ ಸಂಶೋಧನೆಯನ್ನು ನಾವು ಬಳಸುತ್ತೇವೆ. ಕಾನೂನುಬಾಹಿರ CSAM ಮಾತ್ರವಲ್ಲದೆ, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ಕುರಿತು ಪ್ರಚಾರ ಮಾಡುವ ಮತ್ತು ಮಕ್ಕಳನ್ನು ಅಪಾಯಕ್ಕೆ ಗುರಿಯಾಗಿಸುವ ವಿಸ್ತೃತ ಕಂಟೆಂಟ್‌ನ ಮೇಲೂ ನಾವು ಕ್ರಮ ಕೈಗೊಳ್ಳುತ್ತೇವೆ.

ಪತ್ತೆಹಚ್ಚುವುದು ಮತ್ತು ವರದಿ ಮಾಡುವುದು

ಪತ್ತೆಹಚ್ಚುವುದು ಮತ್ತು ವರದಿ ಮಾಡುವುದು


ಮಷಿನ್ ಲರ್ನಿಂಗ್ ವರ್ಗೀಕರಣಗಳು ಹಾಗೂ ಒಂದು “ಹ್ಯಾಶ್”, ಅಥವಾ ಒಂದು ಚಿತ್ರ ಅಥವಾ ವೀಡಿಯೊವನ್ನು ತಿಳಿದಿರುವ CSAM ಜೊತೆಗೆ ಹೋಲಿಸಲು ಸಾಧ್ಯವಾಗುವ ಹಾಗೆ ಅನನ್ಯ ಡಿಜಿಟಲ್ ಫಿಂಗರ್‌ಪ್ರಿಂಟ್ ಅನ್ನು ರಚಿಸುವ ಹ್ಯಾಶ್-ಮ್ಯಾಚಿಂಗ್ ತಂತ್ರಜ್ಞಾನವೂ ಸೇರಿದ ಹಾಗೆ, ತರಬೇತು ಹೊಂದಿರುವ ಪರಿಣತ ತಂಡಗಳು ಹಾಗೂ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿ ನಾವು CSAM ಅನ್ನು ಗುರುತಿಸುತ್ತೇವೆ ಮತ್ತು ವರದಿ ಮಾಡುತ್ತೇವೆ. ನಾವು CSAM ಅನ್ನು ಪತ್ತೆಹಚ್ಚಿದಾಗ, ಪ್ರಪಂಚದಾದ್ಯಂತದ ಕಾನೂನು ಜಾರಿಗೊಳಿಸುವಿಕೆ ಏಜೆನ್ಸಿಗಳೊಂದಿಗೆ ಸಂಪರ್ಕ ಹೊಂದಿರುವ ನ್ಯಾಶನಲ್ ಸೆಂಟರ್ ಫಾರ್ ಮಿಸ್ಸಿಂಗ್ ಆ್ಯಂಡ್ ಎಕ್ಸ್‌ಪ್ಲಾಯ್ಟೆಡ್ ಚಿಲ್ಡ್ರೆನ್ (NCMEC) ಸಂಸ್ಥೆಗೆ ಅದನ್ನು ವರದಿ ಮಾಡುತ್ತೇವೆ.

ಜಾಗತಿಕವಾಗಿ ಸಹಯೋಗದಲ್ಲಿ ಕೆಲಸ ಮಾಡುವುದು

ಜಾಗತಿಕವಾಗಿ ಸಹಯೋಗದಲ್ಲಿ ಕೆಲಸ ಮಾಡುವುದು


ಆನ್‌ಲೈನ್‌ನಲ್ಲಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ವಿರುದ್ಧ ಹೋರಾಡುವ ನಮ್ಮ ಪ್ರಯತ್ನಗಳ ಭಾಗವಾಗಿ, NCMEC ಹಾಗೂ ಇತರ ಸಂಸ್ಥೆಗಳೊಂದಿಗೆ ನಾವು ಜಾಗತಿಕ ಮಟ್ಟದ ಸಹಯೋಗದಿಂದ ಕೆಲಸ ಮಾಡುತ್ತೇವೆ. ಈ ಪ್ರಯತ್ನಗಳ ಭಾಗವಾಗಿ, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಹಾಗೂ ಶೋಷಣೆಯ ಹೊಸ-ಹೊಸ ರೂಪಗಳ ಕುರಿತಾದ ನಮ್ಮ ಜಂಟಿ ತಿಳುವಳಿಕೆಯನ್ನು ವರ್ಧಿಸಲು ಮತ್ತು ಸುಧಾರಿಸಲು, NGO ಗಳು ಹಾಗೂ ಉದ್ಯಮದಲ್ಲಿನ ಸಹಯೋಗಿಗಳೊಂದಿಗೆ ನಾವು ಪ್ರಬಲ ಪಾಲುದಾರಿಕೆಗಳನ್ನು ಸ್ಥಾಪಿಸುತ್ತೇವೆ.

ನಾವು ಅದನ್ನು ಹೇಗೆ ಮಾಡುತ್ತಿದ್ದೇವೆ?

Search ನಲ್ಲಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ವಿರುದ್ಧ ಹೋರಾಡುವುದು

Search ನಲ್ಲಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ವಿರುದ್ಧ ಹೋರಾಡುವುದು


Google Search ಮೂಲಕ ಮಾಹಿತಿಯನ್ನು ಸುಲಭವಾಗಿ ಹುಡುಕಬಹುದು, ಆದರೆ ಕಾನೂನುಬಾಹಿರವಾದ, ಅಥವಾ ಮಕ್ಕಳನ್ನು ಲೈಂಗಿಕವಾಗಿ ಶೋಷಿಸುವ ಕಂಟೆಂಟ್ ಅನ್ನು Search ಪ್ರಸ್ತುತಪಡಿಸುವುದನ್ನು ನಾವೆಂದೂ ಬಯಸುವುದಿಲ್ಲ. ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ಚಿತ್ರಣ, ಅಥವಾ ಮಕ್ಕಳನ್ನು ಲೈಂಗಿಕವಾಗಿ ಬಲಿಪಶುಗಳನ್ನಾಗಿಸುವ, ಅಪಾಯಕ್ಕೆ ಗುರಿಯಾಗಿಸುವ ಅಥವಾ ಅನ್ಯಥಾ ಶೋಷಿಸುವ ಹಾಗೆ ತೋರುವ ಸಾಮಗ್ರಿಯ ಕಡೆಗೆ ಕರೆದೊಯ್ಯುವ ಹುಡುಕಾಟ ಫಲಿತಾಂಶಗಳನ್ನು ನಿರ್ಬಂಧಿಸುವುದು ನಮ್ಮ ನೀತಿಯಾಗಿದೆ. ವರ್ಧಿಸುತ್ತಿರುವ ಈ ಬೆದರಿಕೆಗಳ ವಿರುದ್ಧ ಹೋರಾಡಲು ನಮ್ಮ ಅಲ್ಗಾರಿದಮ್‌ಗಳನ್ನು ನಾವು ಸತತವಾಗಿ ಅಪ್‌ಡೇಟ್ ಮಾಡುತ್ತಿದ್ದೇವೆ.

CSAM ಕಂಟೆಂಟ್ ಅನ್ನು ಕೋರುತ್ತಿವೆ ಎಂದು ನಮಗೆ ಕಂಡುಬರುವ ಹುಡುಕಾಟಗಳಿಗೆ ನಾವು ಹೆಚ್ಚುವರಿ ರಕ್ಷಣೆಗಳನ್ನು ಅನ್ವಯಿಸುತ್ತೇವೆ. ಮಕ್ಕಳು ಮತ್ತು ಲೈಂಗಿಕ ಕಂಟೆಂಟ್‌ನ ನಡುವಿನ ಕೊಂಡಿಯನ್ನು ತಪ್ಪಿಸುವುದಕ್ಕಾಗಿ, ಹುಡುಕಾಟ ಪ್ರಶ್ನೆಯು CSAM ಅನ್ನು ಕೋರುತ್ತಿರುವ ಹಾಗೆ ಕಂಡುಬಂದರೆ ನಾವು ಅಶ್ಲೀಲ ಲೈಂಗಿಕ ಫಲಿತಾಂಶಗಳನ್ನು ಫಿಲ್ಟರ್ ಮಾಡಿ ಹೊರಗಿಡುತ್ತೇವೆ, ಮತ್ತು ವಯಸ್ಕ ಅಶ್ಲೀಲ ಕಂಟೆಂಟ್ ಅನ್ನು ಕೋರುವ ಪ್ರಶ್ನೆಗಳಿಗೆ Search, ಮಕ್ಕಳನ್ನು ಒಳಗೊಂಡಿರುವ ಚಿತ್ರಣವನ್ನು ಮರಳಿಸುವುದಿಲ್ಲ. ಅನೇಕ ದೇಶಗಳಲ್ಲಿ, ಸ್ಪಷ್ಟವಾಗಿ CSAM ಗೆ ಸಂಬಂಧಿಸಿದ ಪ್ರಶ್ನೆಗಳನ್ನು ನಮೂದಿಸುವ ಬಳಕೆದಾರರಿಗೆ, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ಚಿತ್ರಣವು ಕಾನೂನುಬಾಹಿರವಾಗಿದೆ ಎಂಬ ಎಚ್ಚರಿಕೆಯನ್ನು ಎದ್ದುಕಾಣುವ ಹಾಗೆ ತೋರಿಸಲಾಗುತ್ತದೆ, ಜೊತೆಗೆ ಈ ಕಂಟೆಂಟ್ ಅನ್ನು ಯು.ಕೆ. ಯಲ್ಲಿ ಇಂಟರ್ನೆಟ್ ವಾಚ್ ಫೌಂಡೇಶನ್, ಕೆನಡಿಯನ್ ಸೆಂಟರ್ ಫಾರ್ ಚೈಲ್ಡ್ ಪ್ರೊಟೆಕ್ಷನ್ ಹಾಗೂ ಕೊಲಂಬಿಯಾದಲ್ಲಿ ತೆ ಪ್ರೊತೆಹೊದಂತಹ ವಿಶ್ವಾಸಾರ್ಹ ಸಂಸ್ಥೆಗಳಿಗೆ ವರದಿ ಮಾಡುವುದು ಹೇಗೆ ಎಂಬ ಮಾಹಿತಿಯನ್ನು ತೋರಿಸಲಾಗುತ್ತದೆ. ಈ ಎಚ್ಚರಿಕೆಗಳನ್ನು ತೋರಿಸಿದಾಗ, ಬಳಕೆದಾರರರು ಇಂತಹ ಸಾಮಗ್ರಿಯ ಹುಡುಕಾಟವನ್ನು ಮುಂದುವರಿಸುವ ಸಾಧ್ಯತೆ ಕಡಿಮೆಯಾಗುತ್ತದೆ.

ಶೋಷಿಸುವಂತಹ ವೀಡಿಯೊಗಳು ಮತ್ತು ಸಾಮಗ್ರಿಗಳ ವಿರುದ್ಧ ಹೋರಾಡುವ ಸಲುವಾಗಿ YouTube ನ ಕೆಲಸ

ಶೋಷಿಸುವಂತಹ ವೀಡಿಯೊಗಳು ಮತ್ತು ಸಾಮಗ್ರಿಗಳ ವಿರುದ್ಧ ಹೋರಾಡುವ ಸಲುವಾಗಿ YouTube ನ ಕೆಲಸ


YouTube ನಲ್ಲಿ, ಮಕ್ಕಳನ್ನು ಲೈಂಗಿಕವಾಗಿ ಬಿಂಬಿಸುವ ಅಥವಾ ಶೋಷಿಸುವ ವೀಡಿಯೊಗಳು, ಪ್ಲೇಪಟ್ಟಿಗಳು, ಥಂಬ್‌ನೇಲ್‌ಗಳು ಹಾಗೂ ಕಾಮೆಂಟ್‌ಗಳ ವಿರುದ್ಧ ನಾವು ಈ ಹಿಂದಿನಿಂದಲೂ ಸ್ಪಷ್ಟವಾದ ನೀತಿಗಳನ್ನು ಹೊಂದಿದ್ದೇವೆ. ಈ ನೀತಿಗಳ ಉಲ್ಲಂಘನೆಗಳನ್ನು ಪೂರ್ವಭಾವಿಯಾಗಿ ಪತ್ತೆಹಚ್ಚಲು ನಾವು ಮಷಿನ್ ಲರ್ನಿಂಗ್ ಸಿಸ್ಟಂಗಳನ್ನು ಬಳಸುತ್ತೇವೆ ಮಾತ್ರವಲ್ಲದೆ, ನಮ್ಮ ಸಿಸ್ಟಂಗಳು ಪತ್ತೆಹಚ್ಚಿದ, ಅಥವಾ ಬಳಕೆದಾರರು ಹಾಗೂ ನಮ್ಮ ವಿಶ್ವಾಸಾರ್ಹ ಫ್ಲ್ಯಾಗರ್‌ಗಳು ಫ್ಲ್ಯಾಗ್ ಮಾಡಿದ ಉಲ್ಲಂಘನೆಗಳನ್ನು ಕ್ಷಿಪ್ರವಾಗಿ ತೆಗೆದುಹಾಕುವ, ಪರಿಶೀಲನೆ ಮಾಡುವ ವ್ಯಕ್ತಿಗಳನ್ನು ಪ್ರಪಂಚದಾದ್ಯಂತ ಹೊಂದಿದ್ದೇವೆ.

ಅಪ್ರಾಪ್ತ ವಯಸ್ಕರನ್ನು ಒಳಗೊಂಡಿರುವ ಕೆಲವೊಂದು ಕಂಟೆಂಟ್ ನಮ್ಮ ನೀತಿಗಳನ್ನು ಉಲ್ಲಂಘಿಸದಿರಬಹುದಾದರೂ, ಅಪ್ರಾಪ್ತ ವಯಸ್ಸಿನ ಆ ವ್ಯಕ್ತಿಯು ಆನ್‌ಲೈನ್ ಅಥವಾ ಆಫ್‌ಲೈನ್ ಶೋಷಣೆಗೆ ಗುರಿಯಾಗುವ ಅಪಾಯ ಹೊಂದಿರಬಹುದು ಎಂಬುದನ್ನು ನಾವು ಗುರುತಿಸುತ್ತೇವೆ. ಆದ್ದರಿಂದಲೇ, ನಾವು ಈ ನೀತಿಗಳನ್ನು ಜಾರಿಗೊಳಿಸುವಾಗ ಹೆಚ್ಚಿನ ಜಾಗರೂಕತೆಯ ಮಾರ್ಗವನ್ನು ಅನುಸರಿಸುತ್ತೇವೆ. ಅಪ್ರಾಪ್ತ ವಯಸ್ಕರನ್ನು ಅಪಾಯಕ್ಕೆ ಗುರಿಯಾಗಿಸಬಹುದಾದ ವೀಡಿಯೊಗಳನ್ನು ಪೂರ್ವಭಾವಿಯಾಗಿ ಗುರುತಿಸಲು ನಮ್ಮ ಮಷಿನ್ ಲರ್ನಿಂಗ್ ಸಿಸ್ಟಂಗಳು ಸಹಾಯ ಮಾಡುತ್ತವೆ ಮತ್ತು ಲೈವ್ ಫೀಚರ್‌ಗಳನ್ನು ನಿರ್ಬಂಧಿಸುವುದು, ಕಾಮೆಂಟ್‌ಗಳನ್ನು ನಿಷ್ಕ್ರಿಯಗೊಳಿಸುವುದು ಹಾಗೂ ವೀಡಿಯೊ ಶಿಫಾರಸುಗಳನ್ನು ಸೀಮಿತಗೊಳಿಸುವಂತಹ ಕ್ರಮಗಳ ಮೂಲಕ ನಮ್ಮ ರಕ್ಷಣೆಗಳನ್ನು ಸೂಕ್ತ ರೂಪದಲ್ಲಿ ಅನ್ವಯಿಸುತ್ತವೆ.

ನಮ್ಮ CSAM ಪಾರದರ್ಶಕತೆ ವರದಿ

ನಮ್ಮ CSAM ಪಾರದರ್ಶಕತೆ ವರದಿ


ಆನ್‌ಲೈನ್‌ನಲ್ಲಿ ಮಕ್ಕಳ ಮೇಲಿನ ದೌರ್ಜನ್ಯ ಸಾಮಗ್ರಿಯ ವಿರುದ್ಧ ಹೋರಾಡುವ ನಿಟ್ಟಿನಲ್ಲಿ Google ನ ಪ್ರಯತ್ನಗಳ ಕುರಿತಾದ ಪಾರದರ್ಶಕತೆ ವರದಿಯೊಂದನ್ನು ನಾವು 2021 ರಲ್ಲಿ ಬಿಡುಗಡೆ ಮಾಡಿದೆವು ಮತ್ತು ನಾವು NCMEC ಗೆ ಎಷ್ಟು ವರದಿಗಳನ್ನು ಸಲ್ಲಿಸಿದ್ದೇವೆ ಎಂಬುದನ್ನು ಇದರಲ್ಲಿ ವಿವರಿಸಿದೆವು. ಈ ವರದಿಯು YouTube ನಲ್ಲಿ ನಮ್ಮ ಪ್ರಯತ್ನಗಳ ಕುರಿತಾದ ಡೇಟಾವನ್ನು ಸಹ ಒದಗಿಸುತ್ತದೆ, ನಾವು Search ನಲ್ಲಿ CSAM ಫಲಿತಾಂಶಗಳನ್ನು ಹೇಗೆ ಪತ್ತೆಹಚ್ಚುತ್ತೇವೆ ಮತ್ತು ತೆಗೆದುಹಾಕುತ್ತೇವೆ, ಮತ್ತು ನಮ್ಮ ಸೇವೆಗಳಾದ್ಯಂತ CSAM ಉಲ್ಲಂಘನೆಗಳಿಗಾಗಿ ಎಷ್ಟು ಖಾತೆಗಳನ್ನು ನಿಷ್ಕ್ರಿಯಗೊಳಿಸಲಾಗಿದೆ ಎಂಬುದನ್ನು ತಿಳಿಸುತ್ತದೆ.

ನಾವು NCMEC ಯೊಂದಿಗೆ ಹಂಚಿಕೊಳ್ಳುವ CSAM ಹ್ಯಾಶ್‌ಗಳ ಸಂಖ್ಯೆಯ ಕುರಿತಾದ ಮಾಹಿತಿಯೂ ಪಾರದರ್ಶಕತೆ ವರದಿಯಲ್ಲಿರುತ್ತದೆ. ಇತರ ಪ್ಲ್ಯಾಟ್‌ಫಾರ್ಮ್‌ಗಳು CSAM ಅನ್ನು ವ್ಯಾಪಕವಾಗಿ ಗುರುತಿಸಲು ಈ ಹ್ಯಾಶ್‌ಗಳು ಸಹಾಯ ಮಾಡುತ್ತವೆ. NCMEC ಹ್ಯಾಶ್ ಡೇಟಾಬೇಸ್‌ಗೆ ಹ್ಯಾಶ್‌ಗಳನ್ನು ಒದಗಿಸುವುದು, CSAM ವಿರುದ್ಧ ಹೋರಾಡುವ ಪ್ರಯತ್ನದಲ್ಲಿ ನಾವು ಮತ್ತು ಉದ್ಯಮದಲ್ಲಿನ ಇತರರು ಸಹಾಯ ಮಾಡಬಹುದಾದ ಒಂದು ಪ್ರಮುಖ ವಿಧಾನವಾಗಿದೆ, ಏಕೆಂದರೆ ಈ ಸಾಮಗ್ರಿಯ ಮರುಹಂಚುವಿಕೆಯನ್ನು ಇದು ಕಡಿಮೆಗೊಳಿಸುತ್ತದೆ ಮತ್ತು ದೌರ್ಜನ್ಯಕ್ಕೆ ಒಳಗಾದ ಮಕ್ಕಳು ಇದರಿಂದಾಗಿ ಮತ್ತೆ ಬಲಿಪಶುಗಳಾಗುವುದನ್ನು ಕಡಿಮೆ ಮಾಡುತ್ತದೆ.

ನಮ್ಮ ಉತ್ಪನ್ನಗಳಲ್ಲಿ ಅನುಚಿತ ವರ್ತನೆಯ ಕುರಿತು ವರದಿ ಮಾಡುವುದು

ನಮ್ಮ ಉತ್ಪನ್ನಗಳಲ್ಲಿ ಅನುಚಿತ ವರ್ತನೆಯ ಕುರಿತು ವರದಿ ಮಾಡುವುದು


ನಮ್ಮ ಉತ್ಪನ್ನಗಳನ್ನು ಬಳಸುವ ಮಕ್ಕಳನ್ನು ಪ್ರಚೋದನೆ, ಲೈಂಗಿಕ ಕಾರಣಗಳಿಗೆ ಸುಲಿಗೆ, ಮಾನವ ಕಳ್ಳಸಾಗಣೆ ಹಾಗೂ ಮಕ್ಕಳ ಮೇಲಿನ ಇತರ ರೀತಿಯ ಲೈಂಗಿಕ ಶೋಷಣೆಯಿಂದ ರಕ್ಷಿಸಲು ನಾವು ಬಯಸುತ್ತೇವೆ. ನಮ್ಮ ಉತ್ಪನ್ನಗಳನ್ನು ಮಕ್ಕಳು ಬಳಸುವುದಕ್ಕೆ ಸುರಕ್ಷಿತವಾಗಿರಿಸಲು ನಮ್ಮ ಕೆಲಸದ ಭಾಗವಾಗಿ, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ಕಂಟೆಂಟ್‌ನ ಕುರಿತು ಸೂಕ್ತ ಅಧಿಕಾರಿಗಳಿಗೆ ವರದಿ ಮಾಡಲು ಬಳಕೆದಾರರಿಗೆ ನೆರವಾಗಲು ನಾವು ಉಪಯುಕ್ತ ಮಾಹಿತಿಯನ್ನು ಒದಗಿಸುತ್ತೇವೆ.

Gmail ಅಥವಾ Hangouts ನಂತಹ Google ಉತ್ಪನ್ನಗಳಲ್ಲಿ ಒಂದು ಮಗುವನ್ನು ಅಪಾಯಕ್ಕೆ ಗುರಿಯಾಗಿಸಲಾಗಿದೆ ಎಂಬ ಅನುಮಾನ ಬಳಕೆದಾರರಿಗಿದ್ದರೆ, ಈ ಫಾರ್ಮ್ ಅನ್ನು ಬಳಸಿ ಅವರು ಈ ಕುರಿತು ವರದಿ ಮಾಡಬಹುದು. YouTube ನಲ್ಲಿ ಅನುಚಿತ ಕಂಟೆಂಟ್‌ನ ಕುರಿತು ಬಳಕೆದಾರರು ಫ್ಲ್ಯಾಗ್ ಮಾಡಬಹುದು, ಮತ್ತು Google Meet ನಲ್ಲಿ ಸಹಾಯ ಕೇಂದ್ರದ ಮೂಲಕ ಮತ್ತು ಉತ್ಪನ್ನದಲ್ಲಿ ನೇರವಾಗಿ, ದೌರ್ಜನ್ಯದ ಕುರಿತು ವರದಿ ಮಾಡಬಹುದು. ಬಳಕೆದಾರರು ಒಂದು ಮಗುವನ್ನು ಸಂಪರ್ಕಿಸದ ಹಾಗೆ ನಿರ್ಬಂಧಿಸುವುದು ಹೇಗೆ ಎಂಬ ಮಾಹಿತಿಯೂ ಸೇರಿದ ಹಾಗೆ, ಬೆದರಿಕೆ ಮತ್ತು ಕಿರುಕುಳದ ಕುರಿತಾದ ಆತಂಕಗಳನ್ನು ನಿಭಾಯಿಸುವುದು ಹೇಗೆ ಎಂಬ ಕುರಿತು ಸಹ ನಾವು ಮಾಹಿತಿ ಒದಗಿಸುತ್ತೇವೆ. ನಮ್ಮ ಮಕ್ಕಳ ಸುರಕ್ಷತೆ ನೀತಿಗಳ ಕುರಿತು ಹೆಚ್ಚಿನ ಮಾಹಿತಿಗಾಗಿ, YouTube ನ ಸಮುದಾಯ ಮಾರ್ಗಸೂಚಿಗಳು ಹಾಗೂ Google ಸುರಕ್ಷತಾ ಕೇಂದ್ರವನ್ನು ನೋಡಿ.

ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ವಿರುದ್ಧ ಹೋರಾಡಲು ಪರಿಕರಗಳನ್ನು ಅಭಿವೃದ್ಧಿಪಡಿಸುವುದು ಹಾಗೂ ಹಂಚಿಕೊಳ್ಳುವುದು

ಮಕ್ಕಳನ್ನು ರಕ್ಷಿಸಲು ಮತ್ತು ಇತರರು ಸಹ ಹೀಗೆ ಮಾಡುವುದನ್ನು ಬೆಂಬಲಿಸಲು ನಮ್ಮ ತಾಂತ್ರಿಕ ಪರಿಣತಿ ಹಾಗೂ ನಾವೀನ್ಯತೆಯನ್ನು ಬಳಸುತ್ತೇವೆ. ಅರ್ಹ ಸಂಸ್ಥೆಗಳ ಕಾರ್ಯಾಚರಣೆಗಳನ್ನು ಉತ್ತಮಗೊಳಿಸಲು, ವೇಗಗೊಳಿಸಲು ಹಾಗೂ ಸುರಕ್ಷಿತಗೊಳಿಸಲು, ನಮ್ಮ ಅತ್ಯಾಧುನಿಕ ತಂತ್ರಜ್ಞಾನವನ್ನು ಶುಲ್ಕವಿಲ್ಲದೇ ಒದಗಿಸುತ್ತೇವೆ, ಮತ್ತು ಸಂಸ್ಥೆಗಳಿಗೆ ನಮ್ಮ ಮಕ್ಕಳ ಸುರಕ್ಷತಾ ಪರಿಕರಗಳನ್ನು ಬಳಸಲು ಆಸಕ್ತಿಯಿದ್ದರೆ ಅಪ್ಲೈ ಮಾಡಲು ಪ್ರೋತ್ಸಾಹಿಸುತ್ತೇವೆ.

ವಿಷಯ ಸುರಕ್ಷತೆ API

ಹಿಂದೆಂದೂ ನೋಡಿರದ CSAM ಚಿತ್ರಣವನ್ನು ಪೂರ್ವಭಾವಿಯಾಗಿ ಗುರುತಿಸಲು ಮತ್ತು ಪರಿಶೀಲಿಸಲು, ಹಾಗೂ ಒಂದು ವೇಳೆ CSAM ಎಂದು ಖಚಿತವಾದರೆ, ಅದನ್ನು ಕ್ಷಿಪ್ರವಾಗಿ ತೆಗೆದುಹಾಕಲು ಮತ್ತು ವರದಿ ಮಾಡಲು ಸಾಧ್ಯವಾಗುವ ಹಾಗೆ, Google ಅನೇಕ ವರ್ಷಗಳಿಂದ ಮಷಿನ್ ಲರ್ನಿಂಗ್ ಕ್ಲಾಸಿಫೈಯರ್‌ಗಳ ಮೇಲೆ ಕೆಲಸ ಮಾಡುತ್ತಿದೆ. ಈ ತಂತ್ರಜ್ಞಾನವು ವಿಷಯ ಸುರಕ್ಷತೆ API ನ ಅಡಿಪಾಯವಾಗಿದೆ, ಮತ್ತು ಸಂಭಾವ್ಯ ದೌರ್ಜನ್ಯದ ಕಂಟೆಂಟ್ ಅನ್ನು ವರ್ಗೀಕರಿಸಲು ಮತ್ತು ಪರಿಶೀಲನೆಗೆ ಆದ್ಯತೆ ನೀಡಲು ಸಂಸ್ಥೆಗಳಿಗೆ ಸಹಾಯ ಮಾಡುತ್ತದೆ. 2021 ರ ಮೊದಲರ್ಧದಲ್ಲಿ, 6 ಬಿಲಿಯನ್‌ಗೂ ಹೆಚ್ಚು ಚಿತ್ರಗಳನ್ನು ವರ್ಗೀಕರಿಸಲು ಪಾಲುದಾರರು ವಿಷಯ ಸುರಕ್ಷತೆ API ಅನ್ನು ಬಳಸಿದರು; ಈ ಮೂಲಕ, ಸಮಸ್ಯಾತ್ಮಕ ಕಂಟೆಂಟ್ ಅನ್ನು ಹೆಚ್ಚು ವೇಗವಾಗಿ ಮತ್ತು ನಿಖರವಾಗಿ ಗುರುತಿಸಲು ಮತ್ತು ಅದರ ಕುರಿತು ಅಧಿಕಾರಿಗಳಿಗೆ ವರದಿ ಮಾಡಲು ಅವರಿಗೆ ಸಹಾಯವಾಗಿದೆ.

CSAI Match

2014 ರಲ್ಲಿ YouTube ಎಂಜಿನಿಯರ್‌ಗಳು, ನಮ್ಮ ಸೇವೆಗಳಲ್ಲಿ, ತಿಳಿದಿರುವ CSAM ವೀಡಿಯೊಗಳನ್ನು ಟ್ಯಾಗ್ ಮಾಡಲು ಹಾಗೂ ತೆಗೆದುಹಾಕಲು ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದರು ಮತ್ತು ಅಳವಡಿಸಿದರು. ಈ ತಂತ್ರಜ್ಞಾನವನ್ನು ನಾವು CSAI Match ಮೂಲಕ ಇತರರೊಂದಿಗೆ ಹಂಚಿಕೊಳ್ಳುತ್ತೇವೆ; ಇದು ಒಂದು API ಆಗಿದ್ದು, ವೀಡಿಯೊಗಳಲ್ಲಿ ಈ ಹಿಂದೆ ಗುರುತಿಸಲಾದ, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ಕಂಟೆಂಟ್‌ನ ಮರು-ಅಪ್‌ಲೋಡ್‌ಗಳನ್ನು ಗುರುತಿಸಲು ಸಹಾಯ ಮಾಡುತ್ತದೆ. ನಮ್ಮ ಡೇಟಾಬೇಸ್‌ನಲ್ಲಿರುವ, ತಿಳಿದಿರುವ ದೌರ್ಜನ್ಯದ ಕಂಟೆಂಟ್‌ನ ವಿರುದ್ಧ ಹೊಂದಾಣಿಕೆಗಳನ್ನು ಗುರುತಿಸಲು ಸಹಾಯಕ್ಕಾಗಿ CSAI Match ಅನ್ನು NGO ಗಳು ಹಾಗೂ ಕಂಪನಿಗಳು ಬಳಸುತ್ತವೆ; ಇದರಿಂದ, ಸ್ಥಳೀಯ ಕಾನೂನುಗಳು ಮತ್ತು ನಿಯಮಗಳ ಅನುಸಾರ ಅದರ ಕುರಿತು ಜವಾಬ್ದಾರಿಯುತವಾಗಿ ಕ್ರಮ ಕೈಗೊಳ್ಳಲು ಅವರಿಗೆ ಸಾಧ್ಯವಾಗುತ್ತದೆ.

ಸಹಭಾಗಿತ್ವಗಳು ಹಾಗೂ ಪ್ರೋಗ್ರಾಮ್‌ಗಳು

ಆನ್‌ಲೈನ್‌ನಲ್ಲಿ CSAM ನ ವಿನಿಮಯಕ್ಕೆ ತಡೆಯೊಡ್ಡಿ, ಮಕ್ಕಳ ಲೈಂಗಿಕ ಶೋಷಣೆಯನ್ನು ತಡೆಯುವ ಪರಿಹಾರಗಳನ್ನು ಅಭಿವೃದ್ಧಿಪಡಿಸಲು ಕಂಪನಿಗಳು ಹಾಗೂ NGO ಗಳನ್ನು ಜೊತೆಗೂಡಿಸುವ ಟೆಕ್ನಾಲಜಿ ಒಕ್ಕೂಟ, ICT ಒಕ್ಕೂಟ, WeProtect ಗ್ಲೋಬಲ್ ಅಲಯನ್ಸ್, ಮತ್ತು INHOPE ಹಾಗೂ Fair Play ಅಲಯನ್ಸ್‌ನಂತಹ ಹಲವಾರು ಒಕ್ಕೂಟಗಳಲ್ಲಿ ನಾವು ಸಕ್ರಿಯ ಸದಸ್ಯರಾಗಿದ್ದೇವೆ.

ಜೊತೆಯಾಗಿ, ನಾವು ಮಕ್ಕಳ ಸುರಕ್ಷತೆಯ ಕುರಿತಾದ ಸಂಶೋಧನೆಗೆ ಅನುದಾನ ಒದಗಿಸುತ್ತೇವೆ ಮತ್ತು ಪಾರದರ್ಶಕತೆ ವರದಿ, ಉತ್ಪನ್ನದಲ್ಲಿ ಪತ್ತೆಹಚ್ಚುವಿಕೆ ಮತ್ತು ಕಾರ್ಯಾತ್ಮಕ ಪ್ರಕ್ರಿಯೆಗಳ ಕುರಿತಾದ ನಮ್ಮ ಒಳನೋಟಗಳಂತಹ ಪರಿಕರಗಳು ಹಾಗೂ ತಿಳುವಳಿಕೆಯನ್ನು ಹಂಚಿಕೊಳ್ಳುತ್ತೇವೆ.

ಇವರ ಸಹಭಾಗಿತ್ವದಲ್ಲಿ

Google.org ನ ಮೂಲಕ ಜಾಹೀರಾತು ಅನುದಾನಗಳು

Google.org ನ ಮೂಲಕ ಜಾಹೀರಾತು ಅನುದಾನಗಳು


ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಹಾಗೂ ಶೋಷಣೆಯ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿರುವ INHOPE ಹಾಗೂ ECPAT ನಂತಹ ಸಂಸ್ಥೆಗಳಿಗೆ Google.org ಅನುದಾನವನ್ನು ಒದಗಿಸುತ್ತದೆ. ಇದಲ್ಲದೆ, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯವನ್ನು ವರದಿ ಮಾಡುವ ಹಾಟ್‌ಲೈನ್‌ಗಳನ್ನು ನಿರ್ವಹಿಸುವ NGO ಗಳು ಹಾಗೂ ದತ್ತಿ ಸಂಸ್ಥೆಗಳಿಗೆ 2003 ರಿಂದ Google.org ಸುಮಾರು $90 ಮಿಲಿಯನ್‌ನಷ್ಟು ಉಚಿತ ಜಾಹೀರಾತು ಬಜೆಟ್ ಅನ್ನು ನೀಡಿದೆ ಮತ್ತು ಈ ಮೂಲಕ ಈ ಸಂಸ್ಥೆಗಳು, ಬೆಂಬಲದ ಅತ್ಯಗತ್ಯವಿರುವವನ್ನು ತಲುಪಲು ಸಹಾಯ ಮಾಡಿದೆ.

Google Fellow ಪ್ರೋಗ್ರಾಮ್

Google Fellow ಪ್ರೋಗ್ರಾಮ್


ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ವಿರುದ್ಧ ಹೋರಾಡಲು ಸಮರ್ಪಿತವಾಗಿರುವ NCMEC ಹಾಗೂ Thorn ನಂತಹ ಸಂಸ್ಥೆಗಳಲ್ಲಿ ತಾಂತ್ರಿಕ ಫೆಲೋಶಿಪ್‌ಗಳಿಗೆ ನಾವು ಅನುದಾನ ನೀಡುತ್ತೇವೆ. ಇದಲ್ಲದೆ, ಕ್ರೈಮ್ಸ್ ಅಗೈನ್ಸ್ಟ್ ಚಿಲ್ಡ್ರೆನ್ ಕಾನ್ಫರೆನ್ಸ್ ಮತ್ತು ದಿ ನ್ಯಾಶನಲ್ ಲಾ ಎನ್‌ಫೋರ್ಸ್‌ಮೆಂಟ್ ಟ್ರೈನಿಂಗ್ ಆನ್ ಚೈಲ್ದ್ ಎಕ್ಸ್‌ಪ್ಲಾಯ್ಟೇಶನ್‌ನಂತಹ ಫೋರಮ್‌ಗಳ ಮೂಲಕ ಮಕ್ಕಳ ವಿರುದ್ಧದ ಆನ್‌ಲೈನ್ ಅಪಾರಾಧಗಳ ಕುರಿತು ತನಿಖೆ ನಡೆಸುವ ಕಾನೂನು ಜಾರಿಗೊಳಿಸುವಿಕೆ ಅಧಿಕಾರಿಗಳಿಗೆ Google ತರಬೇತಿ ಒದಗಿಸುತ್ತದೆ.