ಮಕ್ಕಳನ್ನು ದೌರ್ಜನ್ಯದಿಂದ ರಕ್ಷಿಸಿ

18 ವರ್ಷಕ್ಕಿಂತ ಕಡಿಮೆ ವಯಸ್ಸಿನ ವ್ಯಕ್ತಿಗಳ ಲೈಂಗಿಕ ಅಶ್ಲೀಲ ಚಿತ್ರಣವನ್ನು ಉದ್ದೇಶಪೂರ್ವಕವಾಗಿ ವೀಕ್ಷಿಸುವುದು ಅಥವಾ ಹೊಂದಿರುವುದು ಕಾನೂನುಬಾಹಿರವಾಗಿದೆ.

ಆನ್‌ಲೈನ್‌ನಲ್ಲಿ ವರದಿ ಮಾಡಿ

ನಿಮಗೆ ಆನ್‌ಲೈನ್‌ನಲ್ಲಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ಚಿತ್ರಗಳು ಅಥವಾ ಸಾಮಗ್ರಿ ಕಂಡುಬಂದರೆ, ಅದನ್ನು ನ್ಯಾಶನಲ್ ಸೆಂಟರ್ ಫಾರ್ ಮಿಸ್ಸಿಂಗ್ ಆ್ಯಂಡ್ ಎಕ್ಸ್‌ಪ್ಲಾಯ್ಟೆಡ್ ಚಿಲ್ಡ್ರೆನ್‌ಗೆ ವರದಿ ಮಾಡಿ.

ನಿಮ್ಮ ವರದಿಯು, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ಕಂಟೆಂಟ್ ಅನ್ನು ವೆಬ್‌ನಿಂದ ತೆಗೆದುಹಾಕಲು ಅನುವು ಮಾಡಿಕೊಡುತ್ತದೆ ಮತ್ತು ಸಂತ್ರಸ್ತ ಮಗುವು ಇನ್ನಷ್ಟು ದೌರ್ಜನ್ಯಕ್ಕೆ ಒಳಗಾಗದಂತೆ ರಕ್ಷಿಸಲು ಸಹಾಯ ಮಾಡಬಹುದು.

ಹೆಚ್ಚುವರಿ ಮಾಹಿತಿಯ ಮೂಲಗಳು

ಮಗುವು ತಕ್ಷಣವೇ ಅಪಾಯಕ್ಕೆ ಗುರಿಯಾಗಲಿದೆ ಎಂದು ನೀವು ಭಾವಿಸಿದರೆ ಪೊಲೀಸರಿಗೆ ಸೂಚನೆ ನೀಡಿ

ಒಂದು ಮಗುವು ತಕ್ಷಣವೇ ದೌರ್ಜನ್ಯಕ್ಕೆ ಒಳಗಾಗುವ ಅಪಾಯವಿದೆ ಎಂದು ನೀವು ಭಾವಿಸಿದರೆ, 911 ಗೆ ಕರೆ ಮಾಡಿ.

ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ಬಲಿಪಶುಗಳನ್ನು ಬೆಂಬಲಿಸುವುದಕ್ಕಾಗಿ ಹೆಲ್ಪ್‌ಲೈನ್‌ಗಳು

ನೀವು, ಅಥವಾ ನಿಮಗೆ ಪರಿಚಯವಿರುವ ಯಾರಾದರೂ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ಬಲಿಪಶುಗಳಾಗಿದ್ದರೆ ಮತ್ತು ಬೆಂಬಲದ ಅಗತ್ಯವಿದ್ದರೆ, NCMEC ವೆಬ್‌ಸೈಟ್‌ನಲ್ಲಿ ನೀವು ಸಂಪನ್ಮೂಲಗಳನ್ನು ಕಾಣಬಹುದು ಅಥವಾ ಸಲಹೆ ಪಡೆಯಲು ಈ ಸಂಖ್ಯೆಯಲ್ಲಿ ಅವರ ಹೆಲ್ಪ್‌ಲೈನ್‌ಗೆ ಕರೆ ಮಾಡಬಹುದು 1-800-843-5678.

ನಿಮ್ಮದೇ ವರ್ತನೆಯ ಕುರಿತು ನಿಮಗೆ ಆತಂಕವಿದ್ದರೆ ಸಹಾಯಕ್ಕಾಗಿ ವಿನಂತಿಸಿ

ಮಕ್ಕಳ ಲೈಂಗಿಕ ಅಶ್ಲೀಲ ಚಿತ್ರಗಳನ್ನು ಕೋರುವುದು, ಗಂಭೀರ ಪರಿಣಾಮಗಳಿಗೆ ಕಾರಣವಾಗಬಹುದು. ಆನ್‌ಲೈನ್‌ನಲ್ಲಿ ನೀವು ಮಕ್ಕಳ ಲೈಂಗಿಕ ಚಿತ್ರಗಳನ್ನು ವೀಕ್ಷಿಸುವ ಕುರಿತು ನಿಮಗೆ ಆತಂಕವಿದ್ದರೆ ಅಥವಾ ನೀವು ಅವುಗಳನ್ನು ವೀಕ್ಷಿಸಿಲ್ಲ ಆದರೆ ಹಾಗೆ ಮಾಡುವ ಹಂಬಲ ಹೊಂದಿದ್ದೀರಿ ಎಂದಾದರೆ, ಸಹಾಯ ಬೇಕಾಗಿದೆ ಎಂಬಲ್ಲಿಂದ ನೀವು ಅನಾಮಧೇಯ, ಗೌಪ್ಯ ಹಾಗೂ ಪರಿಣಾಮಕಾರಿ ಸಹಾಯಕ್ಕೆ ಪ್ರವೇಶ ಪಡೆಯಬಹುದು.

ಮಕ್ಕಳ ರಕ್ಷಣೆ ಸಂಸ್ಥೆಗಳೊಂದಿಗೆ Google ಹೇಗೆ ಕೆಲಸ ಮಾಡುತ್ತದೆ

ಮಕ್ಕಳ ಚಿತ್ರಣವನ್ನು ಹಂಚಿಕೊಳ್ಳುವುದರಿಂದ ಅವರಿಗೆ ಇನ್ನಷ್ಟು ಹಾನಿಯಾಗುವುದನ್ನು ತಪ್ಪಿಸುವುದಕ್ಕಾಗಿ ಕಾನೂನುಬಾಹಿರ ಚಿತ್ರಣವನ್ನು ಹುಡುಕಲು, ತೆಗೆದುಹಾಕಲು ಮತ್ತು ಸೂಕ್ತ ಅಧಿಕಾರಿಗಳಿಗೆ ವರದಿ ಮಾಡಲು Google ಮಕ್ಕಳ ರಕ್ಷಣೆ ಸಂಸ್ಥೆಗಳೊಂದಿಗೆ ಹೇಗೆ ಕೆಲಸ ಮಾಡುತ್ತದೆ ಎಂಬ ಕುರಿತು ಇನ್ನಷ್ಟು ತಿಳಿಯಿರಿ.